ಬಯಲು
ಬಯಲಲ್ಲಿ ನಿಂತವಳು ನಾನು
ನೆರಳಲ್ಲಿ ನೀರಿಲ್ಲ
ಬದುಕು ಬಟಾಬಯಲು
ಕೈ ಹಿಡಿವರಿಲ್ಲ ಕಾಯ್ವರೆನ್ನುವರಿಲ್ಲ
ಬದುಕಿದ್ದೇಕೆ?
ಉತ್ತರಿಸುವರಿಲ್ಲ.
ಅವಲಂಬಿತರಿಗೆ ಕೈ ತುತ್ತು
ಉಣಿಸುತ್ತಾ ಹೋಗಬೇಕೆನ್ನುವ
ಕಸರತ್ತು
ವಿಶಾಲ ಬಯಲಿನ ಕೊನೆ
ಯಾರಿಗೆ ಗೊತ್ತು
ಥಟ್ಟನೆ ಬಯಲು ಕೊನೆಯಾಗಿ
ಮರಗಿಡ ಸೋನೆ ಮಳೆ ನನಗಾಸರೆಯಾಗಿ
ಉಳಿದ ನನ್ನವರು ತಂಪಾಗಿ
ಸೊಂಪಾಗಿ
ಬೆಳೆಯಲಾಸರೆಯ ಹುಡುಕುತ್ತಾ
ಬರಿದಾಗಿ
ಬಯಲಿಗೆ ಮರಳಿ ಹೋಗಲೇ
ಕಾನನದಿ
ಮುಗಿದು ಹೋಗಲೇ ಅರಿವಾಗದೆ
ನಿಂತಲ್ಲಿ ನಿಂತು.
ವೃಂದ.ಸಿ.ಎಂ
No comments:
Post a Comment