Monday, 21 September 2026

ICU

ಚಳಿ, ತುಂಬಾ ಚಳಿ, ತಣ್ಣನೆಯ ಹಿಮದಲ್ಲಿ ಮಲಗಿದ ಹಾಗೆ. ಕೂಗಿದೆ, ನನ್ನ ಧ್ವನಿ ನನಗೇ ಕೇಳಲಿಲ್ಲ. ಗುಯನೇ,ಅಲುಗಿದ್ದರೆ ಸಾಕು, ಶುರು,ಬೀಪ್ ಬೀಪ್ ಸದ್ದು.
 ಊಟ ಮಾಡಿದ್ರ ಅಜ್ಜಿ? ಹೂ ಎಂದ ನನ್ನ ಉತ್ತರ ಅವಳಿಗೆ ಬೇಕೇ ಇರಲಿಲ್ಲ.
 ವೈರಿಧ್ಯಗಳು. ತಂಪು ಕೊಠಡಿ, ಹೊದಿಕೆಯೊಳಗೆ ಬಿಸಿ ಗಾಳಿ. ಯಾಕೆ ಇಲ್ಲಿಗೆ ಬಂದೆ?
 ನಿಮಗೇನು ಆಗಿಲ್ಲ, ಅಜ್ಜಿ. ಬೆಳಿಗ್ಗೆ ಮನೆಗೆ ಹೋಗೋರಂತೆ. ನರಕದ ಹೊಸ್ತಿಲು, ಮನೆಯೆಲ್ಲಿ?
 A c ಯಾಕೆ, ಸಾಯುವ ಜೀವಕ್ಕೆ? ಒಳ್ಳೆ ಗಾಳಿ ಬೇಕಲ್ಲ, ಅದಕ್ಕೆ. 
ತಲೆ ಬಾಚಿ ಕ್ಲಿಪ್ ಹಾಕ್ತೆನೆ, ಇಲ್ಲಾಂದ್ರೆ ಡಾಕ್ಟರ್  ಬೈತಾರೆ.
ಇಲ್ಲದ ಜೀವಕ್ಕೆ ಸಿಂಗಾರ ಏಕಮ್ಮ, ಮಾತು ಹೊರ ಬರಲಿಲ್ಲ. 
ಕಣ್ಣು ಚುಚ್ಚ್ಚವ ಬೆಳಕು, ಕತ್ತಲೆಯೇ ಅಲಿಖಿತ ಶಾಸನ. 
ಮಾತು, ಒಂದು ಹೊನ್ನಿನ ಉಡಿದಾರವೂ ಇಲ್ಲ, ಹೂ ಕಣೆ ತಾಯಿ, ಹೊಂನಿನಂತಹ ಮಾತು ಕೇಳಿಲ್ಲ. ಗುಯ್ ಗುಡುವ ಯಂತ್ರದ ಸದ್ದು ಹಿತ ಎನಿಸಿದೆ. ಮಲಗಲೇ ಇನ್ನು?

No comments:

Post a Comment