Antara Ganga
Monday, 21 September 2026
ICU
ಚಳಿ, ತುಂಬಾ ಚಳಿ, ತಣ್ಣನೆಯ ಹಿಮದಲ್ಲಿ ಮಲಗಿದ ಹಾಗೆ. ಕೂಗಿದೆ, ನನ್ನ ಧ್ವನಿ ನನಗೇ ಕೇಳಲಿಲ್ಲ. ಗುಯನೇ,ಅಲುಗಿದ್ದರೆ ಸಾಕು, ಶುರು,ಬೀಪ್ ಬೀಪ್ ಸದ್ದು. ಊಟ ಮಾಡಿದ್ರ ಅಜ್ಜಿ? ಹೂ ಎಂದ ನನ್ನ ಉತ್ತರ ಅವಳಿಗೆ ಬೇಕೇ ಇರಲಿಲ್ಲ. ವೈರಿಧ್ಯಗಳು. ತಂಪು ಕೊಠಡಿ, ಹೊದಿಕೆಯೊಳಗೆ ಬಿಸಿ ಗಾಳಿ. ಯಾಕೆ ಇಲ್ಲಿಗೆ ಬಂದೆ? ನಿಮಗೇನು ಆಗಿಲ್ಲ, ಅಜ್ಜಿ. ಬೆಳಿಗ್ಗೆ ಮನೆಗೆ ಹೋಗೋರಂತೆ. ನರಕದ ಹೊಸ್ತಿಲು, ಮನೆಯೆಲ್ಲಿ? A c ಯಾಕೆ, ಸಾಯುವ ಜೀವಕ್ಕೆ? ಒಳ್ಳೆ ಗಾಳಿ ಬೇಕಲ್ಲ, ಅದಕ್ಕೆ. ತಲೆ ಬಾಚಿ ಕ್ಲಿಪ್ ಹಾಕ್ತೆನೆ, ಇಲ್ಲಾಂದ್ರೆ dr ಬೈತಾರೆ.ಇಲ್ಲದ ಜೀವಕ್ಕೆ ಸಿಂಗಾರ ಏಕಮ್ಮ, ಮಾತು ಹೊರ ಬರಲಿಲ್ಲ. ಕಣ್ಣು ಚುಚು ವ ಬೆಳಕು, ಕತ್ತಲೆಯೇ ಅಲಿಖಿತ ಶಾಸನ. ಮಾತು, ಒಂದು honnina ಉಡಿದಾರವೂ ಇಲ್ಲ, ಹೂ ಕಣೆ ತಾಯಿ, ಹೊಂನಿನಂತಹ ಮಾತು ಕೇಳಿಲ್ಲ. ಗುಯ್ ಗುಡುವ ಯಂತ್ರದ ಸದ್ದು ಹಿತ ಎನಿಸಿದೆ. ಮಲಗಲೇ ಇನ್ನು?
Friday, 25 July 2025
cold
It was cold.. I was shivering.
Yet not ready to accept.
Touched the face.
It was hard like a rock. So cold.
Something crawling inside my stomach.
Why was there no smile?
Hands were not moving. Wanted to cry..
Why were the legs folded? The silence, the cold, the stillness, the blank faces around.
Suddenly I felt I was alone.I whispered, Anna.. It was cold, cold everywhere.
Tuesday, 15 April 2025
ಅಂಗಿ.
ಅಂಗಿ ಅಂಗಿ ನನ್ನಯ ಅಂಗಿ
ಕೊಟ್ಟವರಾರು,, ನನ್ನಯ ತಂಗಿ.
ಹಸಿರು ಬಣ್ಣದ ಹೊಳೆಯುವ ಅಂಗಿ, ಹೃನ್ಮನ ಸೆಳೆಯುವ ಭಾವದ ಭಂಗಿ.
ವಾರದಲೈದು ದಿನಗಳು ಹಾಕಿ,
ಒಗೆಯುವೆನದನು ಯಂತ್ರಕೆ ಹಾಕಿ.
ಯಾವ ಇಜಾರಕು ಇದು ಸರಿಯೇ ಸೈ
ಹೇಳೇನು ಎಂದಿಗೂ ಇದಕೆ ಬೈ
ಗೆಳೆಯರು ಅನುವರು ಇದೇ ತಾನೇ ನಿಮ್ಮಯ ಅಂಗಿ
ಕೊಟ್ಟವರಲ್ಲವೇ ಮುದ್ದಿನ ತಂಗಿ.
Vrinda
Sunday, 6 April 2025
ಕೆಲವು ಮರೆಯಲಾಗದ ದಿನಗಳು
ಮರೆಯಲು ಸಾಧ್ಯವೇ ಇಲ್ಲದ ದಿನಗಳಲ್ಲಿ ಕಣ್ಣೀರಲ್ಲಿ ಕೆನ್ನೆ ತೋಯ್ದ ದಿನಗಳು ಅಚ್ಚಳಿಯದೆ ಏಕೆ ಉಳಿದಿವೆ?
ಬರಿಯ ಹರುಷದ ದಿನ ಕ್ಷಣ ಎಲ್ಲಿಗೋ ಓಡಿ ಹೋಗಿರುತ್ತಾವೆ. ಹಿಡಿದಿಟ್ಟರೂ ಅಂಗೈಯ್ಲಿ ಮುಚ್ಚಿಟ್ಟರೂ ಚಡಪಡಿಸರೆಕ್ಕ್ಕೆಯಾಡಿಸಿ ಚಿಟ್ಟೆಯಂತೆ ಹಾರಿ ಹೋಗಿ ದುಗುಡವನ್ನೇ ಉಳಿಸುತ್ತವೆ.
ಗಂಟಲಲ್ಲ ಬೆಂಕಿಯ ಉಂಡೆ ಸಿಕ್ಕಿ ಕೊಂಡಂತೆ ಸುಡುತ್ತಾ, ಉರಿಯುತ್ತ ಜೀವ ಸೀಳಿ ಕಿತ್ತು ತಿನ್ನುತ್ತವೆ.. ತುಟಿಯ ಮೇಲಿನ ಕಿರುನಗೆಯ ಅಳಿಸಿ ಹಾಕಿ ಬೆಚ್ಚಗಿನ ಕಣ್ಣೀರ ಧಾರೆ ಹರಿಸುತ್ತವೆ..
Vrinda..
Thursday, 13 March 2025
ದಹನ
ಹೋಲಿಕೆ ಸುಟ್ಟವಳೋ ಸುಟ್ಟು ಹೋದವಳೋ ಉಳಿದದ್ದಂತು ಬರೀ ಬೂದಿ..
ಬೆಂಕಿಯ ಬಿಸಿ ಹಬೆ, ಹಸಿ ಮಾಂಸ ಸುಟ್ಟ ಕಮಟು ವಾಸನೆ, ಜೀವಕ್ಕೆ ಸಾವೇ ಆದರೂ ಈ ಪರಿ ನೋವೇಕೆ?
ತಪ್ಪು ಒಪ್ಪುಗಳ ನಡುವಿನ ವೈರುಧ್ಯಕ್ಕೆ ಬಲವಾದ ಒಳ ಸುಳಿ ಅಗೌರವ, ಅಸಹನೆ.
ಬಿಡದೆ ಸುಡುವ ತೀಕ್ಷಣ ನಂಜಿನಆಂಬು
ನಂಜಿರದ ಬಾಳು ಕನ್ನಡಿಯ ಗಂಟೇಕೆ?
ಸುಡುವಿರೇಕೆ, ಬಿಟ್ಟುಬಿಡಿ. ಆಸೆಯ, ಕನಸುಗಳ ನಿರೀಕ್ಷೆ ಗಳ ಬೆಳೆಯ ಬಿಡಿ.
ಮನುಜರಲ್ಲವೇ ನಾವು?!
ಧಗೆಯೇಕೆ, ಬಿಸಿಲ ಬಾಯಾರಿಕೆಯೇಕೆ
ನೋಯಿಸಲೇಕೆ
ಪುಟ್ಟದೊಂದು ಮನವಿದೆ, ಧೂಮಕರಿ ಆಗದೆ ಅರಳಲು ಬಯಸುವದದು
ಸಲಿಲ ಧಾರೆ ಎರೆದು, ತಿಳಿ ಹಸಿರು
ಎಲೆಗಳ ನಡುವೆ ಹೂ ಅರಳಲು ಬಿಡಿ ತಂಪು ನುಡಿ ತಂಪು ನೆಲ ದಾರಿ ತೋರಿ ನಡೆಸಿ,..
ವೃಂದ
Friday, 21 June 2024
ಕಳೆದು ಹೋದವಳು
ಕಳೆದು ಹೋಗಿದ್ದೆ ನಾನು ಬದುಕಿನಲ್ಲೆಲ್ಲೋ
ನಾನಾಗಿ ನನಗಾಗಿ ಬದುಕಲಿಲ್ಲ
ಯಾತನೆಗಳ ಕೂಪದಲ್ಲೆಲ್ಲೋ ತಂಪನೆಯ ಗಂಧ ಲೇಪ
ಉಸಿರುಗತ್ತಿಸುವ ಬದುಕಿನ ತಂಗಾಳಿಯ ಸ್ಪರ್ಶ ಲೇಪ
ಕುಡಿಯೊಡೆಯುವ ಕನಸುಗಳು ಮುರುಟಿ ಹೋಗುವ ಮನಸುಗಳು
ಕಳೆದು ಹೋದ ನನ್ನಲ್ಲಿ ಹುದುಗಿ ಹೋಗಿತ್ತೆಲ್ಲ ಕನಸುಗಳು
ಗುರಿ ಯಾರದೋ ಹೆಜ್ಜೆ ನನ್ನದು
ಸುಳಿಯ ಸೆಳೆತ ಹೋರಾಟ ನನ್ನದು
ನಿಶ್ಶಬ್ಧವಾಗಿ ಬಿಕ್ಕುವ ಪದಗಳು ನನ್ನವು
ಹೆರವರ ಹಾದಿಯಲ್ಲಿ ನಗೆಯ ಮುಖವಾಡ ನನ್ನದು
ಕಳೆದು ಹೋದವಳು ನಾನು ಹುಡುಕಲೇಕೆ
ಹತ್ತು ನೂರು ಸಾವಿರ ಲಕ್ಷ ಕೋಟಿ ಅಕ್ಷೋಹಿಣಿ ಹೆಣ್ಮನಗಳು ಕಾಣೆಯಾಗುವುದೇಕೆ
ಕರ್ತವ್ಯ ದ ಕೂಗಿಗೋ ಹೆರವರ ಕೂಳಿನ ಹಂಗಿಗೋ
ಹೆದರಿ ಓಗೊಟ್ಟು ತನ್ನದೇ ಕಾಲ ತಾನೇ ಮರೆಯುವುದೇಕೆ
ಉಸುಕಿನೊಳಗೆ ಬೆಂದದ್ದು ಕಳೆದು ಹೋದ ನಾನು
ಹರಿವ ಹೊಳೆ ನೀರ ಸೆಲೆ ಹುಡುಕುತ್ತಾ ಕಳೆದೇ ಹೋದೆ ನಾನು
ವ್ಯರ್ಥ ಬದುಕು ಬೇಡದ ಪಾತ್ರ ನೀಸಲಾಗದೆ ಕಳೆದು ಹೋದ ನನ್ನ ಹುಡುಕುವುದೇನು ಬಿಟ್ಟು ಬಿಡು
ಸಿಗಲಾರೆ ಕಳೆದು ಹೋದ ನಾನು
-ವೃಂದ ಸಿ ಎಂ
Sunday, 28 April 2024
ಬಯಲು
ಬಯಲು
ಬಯಲಲ್ಲಿ ನಿಂತವಳು ನಾನು
ನೆರಳಲ್ಲಿ ನೀರಿಲ್ಲ
ಬದುಕು ಬಟಾಬಯಲು
ಕೈ ಹಿಡಿವರಿಲ್ಲ ಕಾಯ್ವರೆನ್ನುವರಿಲ್ಲ
ಬದುಕಿದ್ದೇಕೆ?
ಉತ್ತರಿಸುವರಿಲ್ಲ.
ಅವಲಂಬಿತರಿಗೆ ಕೈ ತುತ್ತು
ಉಣಿಸುತ್ತಾ ಹೋಗಬೇಕೆನ್ನುವ
ಕಸರತ್ತು
ವಿಶಾಲ ಬಯಲಿನ ಕೊನೆ
ಯಾರಿಗೆ ಗೊತ್ತು
ಥಟ್ಟನೆ ಬಯಲು ಕೊನೆಯಾಗಿ
ಮರಗಿಡ ಸೋನೆ ಮಳೆ ನನಗಾಸರೆಯಾಗಿ
ಉಳಿದ ನನ್ನವರು ತಂಪಾಗಿ
ಸೊಂಪಾಗಿ
ಬೆಳೆಯಲಾಸರೆಯ ಹುಡುಕುತ್ತಾ
ಬರಿದಾಗಿ
ಬಯಲಿಗೆ ಮರಳಿ ಹೋಗಲೇ
ಕಾನನದಿ
ಮುಗಿದು ಹೋಗಲೇ ಅರಿವಾಗದೆ
ನಿಂತಲ್ಲಿ ನಿಂತು.
ವೃಂದ.ಸಿ.ಎಂ
Subscribe to:
Posts (Atom)