Showing posts with label kannada poem. Show all posts
Showing posts with label kannada poem. Show all posts

Thursday, 29 October 2026

ಸಲಿಲ ಧಾರೆ

 


ಝುಳ ಝುಳನೆ ಹರಿಯುವ ನೀರೇ,

ನೀನೇನು ಸ್ವರ್ಗದಿಂದಿಳಿದ ಸಲಿಲ ಧಾರೆಯೇ

ಶ್ವೇತ ಧವಳ ಕಾಂತಿ ಇಮ್ ಕಂಗೊಳಿಪ,

ಜಲ ಧಾರೆಯೇ,,ಈ ನಲಿದಾಟ ಎಲ್ಲಿಂದ ತಂದೆಯೇ

ಮೇಲಿಂದ ದುಮುಕಿದರೆ ಇಳೆಗೆ ನೋಯುವುದೆಂದು

ನಲಿ ನಲಿದು ಹರಿದೆಯೇ,

ನಿಲ್ಲಿಸದೆ ಹರಿಯುತಲಿರು ತೆಳು ಮೋಡದ ಹಾಗೆಯೇ..

ಹಚ್ಛ ಹಸಿರು ಜೀವ ಜಾತಿಗೆ ಉಸಿರಾಗುವ ಯೋಜನೆಯೇ

ನಿರ್ಜೀವ ಕಲ್ಲಿಗೂ ಉಸಿರು ತುಂಬುವೆಯೇ

ಬಂಡೆ ಕಲ್ಲುಗಳಿಗೆ ಜೀವಜಲ 

ಹರಿಸಿನೋಡುವೆಯೇ,

ನೀಲಿ ಬಾನಲ್ಲಿ  ಅಂದವೆನಿದೆ ನನ್ನ ಲಾಸ್ಯ

Nodennuveye, 

ಹರಿಯುತ್ತಿರು ಬೀಳುತ್ತಿರು ಲಾವಣ್ಯವತಿ,

ಹೀಗೆ   ನಿಲ್ಲಿಸದೆಯ

ಪ್ರಪಾತದ ಆಳಕ್ಕಿಳಿದು ಮಂದಗಮನೆಯಾಗಿ ಹರಿಯುತಲೆ...

- ವೃಂದ ಜನಾರ್ಧನ

Friday, 21 June 2024

ಕಳೆದು ಹೋದವಳು

ಕಳೆದು ಹೋಗಿದ್ದೆ ನಾನು ಬದುಕಿನಲ್ಲೆಲ್ಲೋ
ನಾನಾಗಿ ನನಗಾಗಿ ಬದುಕಲಿಲ್ಲ

ಯಾತನೆಗಳ ಕೂಪದಲ್ಲೆಲ್ಲೋ ತಂಪನೆಯ ಗಂಧ ಲೇಪ
ಉಸಿರುಗತ್ತಿಸುವ ಬದುಕಿನ ತಂಗಾಳಿಯ ಸ್ಪರ್ಶ ಲೇಪ
ಕುಡಿಯೊಡೆಯುವ ಕನಸುಗಳು ಮುರುಟಿ ಹೋಗುವ ಮನಸುಗಳು   
ಕಳೆದು ಹೋದ ನನ್ನಲ್ಲಿ ಹುದುಗಿ ಹೋಗಿತ್ತೆಲ್ಲ ಕನಸುಗಳು  

 ಗುರಿ ಯಾರದೋ ಹೆಜ್ಜೆ ನನ್ನದು 
ಸುಳಿಯ ಸೆಳೆತ ಹೋರಾಟ ನನ್ನದು 

ನಿಶ್ಶಬ್ಧವಾಗಿ ಬಿಕ್ಕುವ ಪದಗಳು ನನ್ನವು
ಹೆರವರ ಹಾದಿಯಲ್ಲಿ ನಗೆಯ ಮುಖವಾಡ ನನ್ನದು 
ಕಳೆದು ಹೋದವಳು ನಾನು ಹುಡುಕಲೇಕೆ
ಹತ್ತು ನೂರು ಸಾವಿರ ಲಕ್ಷ ಕೋಟಿ ಅಕ್ಷೋಹಿಣಿ ಹೆಣ್ಮನಗಳು ಕಾಣೆಯಾಗುವುದೇಕೆ 

ಕರ್ತವ್ಯ ದ ಕೂಗಿಗೋ ಹೆರವರ ಕೂಳಿನ ಹಂಗಿಗೋ 
ಹೆದರಿ ಓಗೊಟ್ಟು ತನ್ನದೇ ಕಾಲ ತಾನೇ ಮರೆಯುವುದೇಕೆ 

ಉಸುಕಿನೊಳಗೆ ಬೆಂದದ್ದು ಕಳೆದು ಹೋದ ನಾನು 
ಹರಿವ ಹೊಳೆ ನೀರ ಸೆಲೆ ಹುಡುಕುತ್ತಾ ಕಳೆದೇ ಹೋದೆ ನಾನು 
ವ್ಯರ್ಥ ಬದುಕು ಬೇಡದ ಪಾತ್ರ ನೀಸಲಾಗದೆ ಕಳೆದು ಹೋದ ನನ್ನ ಹುಡುಕುವುದೇನು ಬಿಟ್ಟು ಬಿಡು 
ಸಿಗಲಾರೆ ಕಳೆದು ಹೋದ ನಾನು 
-ವೃಂದ ಸಿ ಎಂ

Sunday, 28 April 2024

ಬಯಲು

 

ಬಯಲು

ಬಯಲಲ್ಲಿ ನಿಂತವಳು ನಾನು

ನೆರಳಲ್ಲಿ ನೀರಿಲ್ಲ ಬದುಕು ಬಟಾಬಯಲು

 

ಕೈ ಹಿಡಿವರಿಲ್ಲ ಕಾಯ್ವರೆನ್ನುವರಿಲ್ಲ

ಬದುಕಿದ್ದೇಕೆ? ಉತ್ತರಿಸುವರಿಲ್ಲ.

ಅವಲಂಬಿತರಿಗೆ ಕೈ ತುತ್ತು

ಉಣಿಸುತ್ತಾ ಹೋಗಬೇಕೆನ್ನುವ ಕಸರತ್ತು

ವಿಶಾಲ ಬಯಲಿನ ಕೊನೆ ಯಾರಿಗೆ ಗೊತ್ತು

 

ಥಟ್ಟನೆ ಬಯಲು ಕೊನೆಯಾಗಿ

ಮರಗಿಡ ಸೋನೆ ಮಳೆ ನನಗಾಸರೆಯಾಗಿ

ಉಳಿದ ನನ್ನವರು ತಂಪಾಗಿ ಸೊಂಪಾಗಿ

ಬೆಳೆಯಲಾಸರೆಯ ಹುಡುಕುತ್ತಾ ಬರಿದಾಗಿ

ಬಯಲಿಗೆ ಮರಳಿ ಹೋಗಲೇ ಕಾನನದಿ

ಮುಗಿದು ಹೋಗಲೇ ಅರಿವಾಗದೆ ನಿಂತಲ್ಲಿ ನಿಂತು.

ವೃಂದ.ಸಿ.ಎಂ